•  
  •  
  •  
  •  
Index   ವಚನ - 289    Search  
 
ಅಂಗುಷ್ಠದಲ್ಲಿ ಸರ್ಪದಷ್ಟವಾಗಲು ಸರ್ವಾಂಗವೆಲ್ಲವು ವಿಷಮಯವಾಗಿಪ್ಪುದು ನೋಡಾ. ಶರಣನೆಂಬಂಗದ ಮೇಲೆ ಲಿಂಗದಷ್ಟವಾಗಲು ಆ ಶರಣನ ಸರ್ವಾಂಗವೆಲ್ಲವು ಲಿಂಗವಪ್ಪುದು ತಪ್ಪದು ನೋಡಾ. ಲಿಂಗವನಪ್ಪಿ ಲಿಂಗಸಂಗಿಯಾದ ಅಭಂಗ ಶರಣಂಗೆ ಅನಂಗಸಂಗವುಂಟೆ? ಬಿಡಾ ಮರುಳೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Aṅguṣṭhadalli sarpadaṣṭavāgalu sarvāṅgavellavu viṣamayavāgippudu nōḍā. Śaraṇanembaṅgada mēle liṅgadaṣṭavāgalu ā śaraṇana sarvāṅgavellavu liṅgavappudu tappadu nōḍā. Liṅgavanappi liṅgasaṅgiyāda abhaṅga śaraṇaṅge anaṅgasaṅgavuṇṭe? Biḍā maruḷe, mahāliṅgaguru śivasid'dhēśvara prabhuvē.