ಶರಣನಂಗ ಲಿಂಗವನಪ್ಪಿತ್ತಾಗಿ
ಶರಣನ ತನುವೆ ಲಿಂಗದ ತನು ನೋಡಾ.
ಲಿಂಗದ ತನು ಶರಣನನಪ್ಪಿತ್ತಾಗಿ
ಶರಣನ ತನುವೆ ಲಿಂಗದ ತನು ನೋಡಾ.
ಶರಣನ ಮನ ಲಿಂಗವನಪ್ಪಿ,
ಲಿಂಗದ ಮನ ಶರಣನನಪ್ಪಿದ ಕಾರಣ
ಶರಣನ ಮನವೆ ಲಿಂಗ; ಲಿಂಗದ ಮನವೆ ಶರಣ ನೋಡಾ.
ಶರಣನ ಹರಣ ಲಿಂಗವನಪ್ಪಿ
ಲಿಂಗದ ಹರಣ ಶರಣನನಪ್ಪಿದ ಕಾರಣ
ಶರಣನ ಹರಣವೆ ಲಿಂಗ
ಲಿಂಗದ ಹರಣವೆ ಶರಣ ನೋಡಾ.
ಶರಣನ ಭಾವವೆ ಲಿಂಗವನಪ್ಪಿ;
ಲಿಂಗದ ಭಾವ ಶರಣನನಪ್ಪಿದ ಕಾರಣ
ಶರಣನ ಭಾವವೆ ಲಿಂಗ; ಲಿಂಗದ ಭಾವವೆ ಶರಣ ನೋಡಾ.
`ಅಹಂ ಮಾಹೇಶ್ವರಃ ಪ್ರಾಣೋ| ಮಮ ಪ್ರಾಣೋ ಮಾಹೇಶ್ವರಃ
ತಸ್ಮಾದ್ಧವಿರಳಂ ನಿತ್ಯಂ| ಶರಣಂ ನಾಮವರ್ತತೇ||'
ಎಂದುದಾಗಿ ಭಾವ ಭೇದವಿಲ್ಲ ಶರಣ ಲಿಂಗಕ್ಕೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Śaraṇanaṅga liṅgavanappittāgi
śaraṇana tanuve liṅgada tanu nōḍā.
Liṅgada tanu śaraṇananappittāgi
śaraṇana tanuve liṅgada tanu nōḍā.
Śaraṇana mana liṅgavanappi,
liṅgada mana śaraṇananappida kāraṇa
śaraṇana manave liṅga; liṅgada manave śaraṇa nōḍā.
Śaraṇana haraṇa liṅgavanappi
liṅgada haraṇa śaraṇananappida kāraṇa
śaraṇana haraṇave liṅga
Liṅgada haraṇave śaraṇa nōḍā.
Śaraṇana bhāvave liṅgavanappi;
liṅgada bhāva śaraṇananappida kāraṇa
śaraṇana bhāvave liṅga; liṅgada bhāvave śaraṇa nōḍā.
`Ahaṁ māhēśvaraḥ prāṇō| mama prāṇō māhēśvaraḥ
tasmād'dhaviraḷaṁ nityaṁ| śaraṇaṁ nāmavartatē||'
endudāgi bhāva bhēdavilla śaraṇa liṅgakke,
mahāliṅgaguru śivasid'dhēśvara prabhuvē.