ಐದೂರ ಹೊಲದಲಿ ಕೆಟ್ಟ ಪಶುವನು
ಆರೂರ ಹೊಕ್ಕು ಅರಿಸಿಹೆನೆಂದು ಹೋದರೆ
ಮೂರೇ ಮನೆಯಲ್ಲಿ ಈರುಗಾರಾಗಲಾಗಿ
ಅರಸಬಂದಯ್ಯಗಳು ಆಸತ್ತು ಹೋದರಲ್ಲ.
ಅರಸುವ ಅರುಹೆ ತಾನೆಂದು ತಿಳಿಯಲು
ಮೂಲಾಕ್ಷರವಾಗಿ ತೋರುವ
ಮೂಲಾಕ್ಷರಾತ್ಮಕ ತಾನೆ ತಪ್ಪದೆಂಬೆನಯ್ಯ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Aidūra holadali keṭṭa paśuvanu
ārūra hokku arisihenendu hōdare
mūrē maneyalli īrugārāgalāgi
arasabandayyagaḷu āsattu hōdaralla.
Arasuva aruhe tānendu tiḷiyalu
mūlākṣaravāgi tōruva
mūlākṣarātmaka tāne tappadembenayya
mahāliṅgaguru śivasid'dhēśvara prabhuvē.