ಚಂದ್ರಮನ ರಾಹುವೆಡೆಗೊಳಲು
ಪುರ ನಿಂದಿರಿವುತ್ತಿದೆ ನೋಡಾ.
ಮಂದಾರಗಿರಿಯ ಸಲಿಲ ಮುಂಜೂರಲೊಸರಲು
ನಿಂದಿರುವುದು ಕೆಟ್ಟು ನಿಜ ನಿಂದಿತ್ತಯ್ಯ ಎನ್ನ ತಂದೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Candramana rāhuveḍegoḷalu
pura nindirivuttide nōḍā.
Mandāragiriya salila mun̄jūralosaralu
nindiruvudu keṭṭu nija nindittayya enna tande,
mahāliṅgaguru śivasid'dhēśvara prabhuvē.