ಭಕ್ತಂಗೆ ಲಿಂಗವಾವುದು, ಮಾಹೇಶ್ವರಂಗೆ ಲಿಂಗವಾವುದು,
ಪ್ರಸಾದಿಗೆ ಲಿಂಗವಾವುದು, ಪ್ರಾಣಲಿಂಗಿಗೆ ಲಿಂಗವಾವುದು,
ಶರಣಂಗೆ ಲಿಂಗವಾವುದು, ಐಕ್ಯಂಗೆ ಲಿಂಗವಾವುದುಯೆಂದರೆ
ಈ ಲಿಂಗಸ್ಥಲಂಗಳ ಭೇದವ ಹೇಳಿಹೆನಯ್ಯಾ.
ಭಕ್ತಂಗೆ ಆಚಾರಲಿಂಗ. ಮಾಹೇಶ್ವರಂಗೆ ಗುರುಲಿಂಗ.
ಪ್ರಸಾದಿಗೆ ಶಿವಲಿಂಗ. ಪ್ರಾಣಲಿಂಗಿಗೆ ಜಂಗಮಲಿಂಗ.
ಶರಣಂಗೆ ಪ್ರಸಾದಲಿಂಗ.
ಐಕ್ಯಂಗೆ ಮಹಾಲಿಂಗವೆಂದು ಹೇಳಲ್ಪಟ್ಟಿತ್ತಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Bhaktaṅge liṅgavāvudu, māhēśvaraṅge liṅgavāvudu,
prasādige liṅgavāvudu, prāṇaliṅgige liṅgavāvudu,
śaraṇaṅge liṅgavāvudu, aikyaṅge liṅgavāvuduyendare
ī liṅgasthalaṅgaḷa bhēdava hēḷihenayyā.
Bhaktaṅge ācāraliṅga. Māhēśvaraṅge guruliṅga.
Prasādige śivaliṅga. Prāṇaliṅgige jaṅgamaliṅga.
Śaraṇaṅge prasādaliṅga.
Aikyaṅge mahāliṅgavendu hēḷalpaṭṭittayya,
mahāliṅgaguru śivasid'dhēśvara prabhuvē.