•  
  •  
  •  
  •  
Index   ವಚನ - 439    Search  
 
ಕಾಲಾಗ್ನಿರುದ್ರನ ಲೋಕದಿಂದ ಜೇನುಮಳೆ ಕರೆವುದ ಮಾನವಲೋಕದವರು ಕಂಡು, ಕಾಲಾಗ್ನಿರುದ್ರನ ಭುವನವೆತ್ತ ಜೇನಮಳೆಯತ್ತಲೆಂದು ತಾವು ಚೋದ್ಯವ ಮಾಡುತ್ತಿರಲು, ಮೇಲಣ ಲೋಕದಿಂದ ಅಮೃತಸೋನೆ ಸುರಿಯಲು ಕಾಲಾಗ್ನಿ ಕೆಟ್ಟಿತ್ತು. ಜೇನಸೋನೆ ಅಮೃತವಾಗದ ಮುನ್ನ ನೋಡಬಂದವರೆಲ್ಲ ಸತ್ತುದ ಕಂಡು, [ತಾ] ನಿರ್ವಯಲಾದನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Kālāgnirudrana lōkadinda jēnumaḷe karevuda mānavalōkadavaru kaṇḍu, kālāgnirudrana bhuvanavetta jēnamaḷeyattalendu tāvu cōdyava māḍuttiralu, mēlaṇa lōkadinda amr̥tasōne suriyalu kālāgni keṭṭittu. Jēnasōne amr̥tavāgada munna nōḍabandavarella sattuda kaṇḍu, [tā] nirvayalādanu nōḍā, mahāliṅgaguru śivasid'dhēśvara prabhuvē.