•  
  •  
  •  
  •  
Index   ವಚನ - 501    Search  
 
ತತ್ವಾತತ್ವವೆಂಬ ಮಿಥ್ಯಾ ಛಾಯೆಯಿಲ್ಲದ ಬಚ್ಚಬರಿಯ ಬಯಲ ಬಣ್ಣ ಶೃಂಗರಿಸಿ ಪರತತ್ವವಾಯಿತ್ತು ನೋಡಾ. ಆ ಪರತತ್ವ ತನ್ನ ಶಕ್ತಿ ಸಾಮಥ್ರ್ಯದಿಂದ ವಿಭಜಿಸಿ ಅಂಗ ಲಿಂಗವಾಯಿತ್ತು ನೋಡಾ. ಅಂಗವೆಂದರೆ ಶರೀರ; ಲಿಂಗವೆಂದರೆ ಪ್ರಾಣ. ಇದು ಕಾರಣ ಶರಣ ಲಿಂಗಕ್ಕೆ ಭಿನ್ನವೆಲ್ಲಿಯದು? ಭೇದವೆಲ್ಲಿಯದು ಬಿಡಾ ಮರುಳೆ. ಶರಣನೇ ಲಿಂಗವೆಂಬುದು ಸತ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Tatvātatvavemba mithyā chāyeyillada baccabariya bayala baṇṇa śr̥ṅgarisi paratatvavāyittu nōḍā. Ā paratatva tanna śakti sāmathryadinda vibhajisi aṅga liṅgavāyittu nōḍā. Aṅgavendare śarīra; liṅgavendare prāṇa. Idu kāraṇa śaraṇa liṅgakke bhinnavelliyadu? Bhēdavelliyadu biḍā maruḷe. Śaraṇanē liṅgavembudu satya, mahāliṅgaguru śivasid'dhēśvara prabhuvē.