ಪಶ್ಚಿಮ ಚಕ್ರದಲ್ಲಿ ನಿತ್ಯ ನಿರಂಜನನ ಬೆಳಗು
ತತ್ವಬ್ರಹ್ಮಾಂಡದಿಂದತ್ತತ್ತಲಾದ ಘನ ನೋಡಾ.
ಅದು ಪರಂಜ್ಯೋತಿ ಪರತತ್ವ ಪರಾಪರವಸ್ತುವೇ
ಪ್ರಸಾದ ನೋಡಾ.
ಪ್ರತಿಯಿಲ್ಲದ ಅಪ್ರತಿಮ ಪ್ರಸಾದದಲ್ಲಿ ನಿಃಪತಿಯಾಗಿ
ಮಹಾಪ್ರಸಾದಿಯಾದೆನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Paścima cakradalli nitya niran̄janana beḷagu
tatvabrahmāṇḍadindattattalāda ghana nōḍā.
Adu paran̄jyōti paratatva parāparavastuvē
prasāda nōḍā.
Pratiyillada apratima prasādadalli niḥpatiyāgi
mahāprasādiyādenu nōḍā,
mahāliṅgaguru śivasid'dhēśvara prabhuvē.