ಅಕ್ಕನ ತಮ್ಮನ ಸಂಗದಿಂದ ಹೆತ್ತವ್ವೆ ಹುಟ್ಟಿದಳು ನೋಡಾ.
ಹೆತ್ತವ್ವೆ ಹುಟ್ಟಲು ಅಕ್ಕನು ತಮ್ಮನು ಅಳಿದರು ನೋಡಾ.
ಹೆತ್ತವ್ವೆ ಮುತ್ತವ್ವೆಯ ನುಂಗಿ ಪರತತ್ವವನೆಯ್ದಿದಳು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Akkana tam'mana saṅgadinda hettavve huṭṭidaḷu nōḍā.
Hettavve huṭṭalu akkanu tam'manu aḷidaru nōḍā.
Hettavve muttavveya nuṅgi paratatvavaneydidaḷu nōḍā,
mahāliṅgaguru śivasid'dhēśvara prabhuvē.