•  
  •  
  •  
  •  
Index   ವಚನ - 11    Search  
 
ಕರಣದ ಕಲ್ಮಷ ಹರಿಯಿತ್ತಾಗಿ ನಿರ್ಮಲತನುವಾಯಿತ್ತು. ಆ ನಿರ್ಮಲತನುವಿನಲ್ಲಿ ಶಿವಪ್ರಸಾದವೆಡೆಗೊಂಡಿತ್ತಾಗಿ ಭಕ್ತಿಪಿಂಡವಾಯಿತ್ತು. ಆ ಭಕ್ತಿಪಿಂಡದಲ್ಲಿ ನೀವಿಪ್ಪಿರಾಗಿ ಶರಣಂಗೆ ಪಿಂಡನಾಮವಾಯಿತ್ತು. ಅದು ಕಾರಣ ಶರಣಂಗೂ ನಮಗೂ ಒಂದೆ ಭಕ್ತಿಪಿಂಡವಾಯಿತ್ತು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.
Transliteration Karaṇada kalmaṣa hariyittāgi nirmalatanuvāyittu. Ā nirmalatanuvinalli śivaprasādaveḍegoṇḍittāgi bhaktipiṇḍavāyittu. Ā bhaktipiṇḍadalli nīvippirāgi śaraṇaṅge piṇḍanāmavāyittu. Adu kāraṇa śaraṇaṅgū namagū onde bhaktipiṇḍavāyittu kāṇā, nijaguru svatantrasid'dhaliṅgēśvara.