ಗುರುವೆಂದರಿಯರು, ಲಿಂಗವೆಂದರಿಯರು,
ಜಂಗಮವೆಂದರಿಯರು.
ಹಿಂದೊಂದನಾಡುವರು, ಮುಂದೊಂದನಾಡುವರು.
ಮತ್ತೆ, ನಂಬದೆ, ಭಕ್ತರಂತೆ, ಪಾದೋದಕ
ಪ್ರಸಾದಕ್ಕೆ ಕೈಯ್ಯನಾನುವರು.
ಈಶ ವೇಷವ ತೊಟ್ಟ, ವೇಷಧಾರಕರು, ತಾವೆ, ಭಕ್ತರೆಂಬರು.
ಇವರು, ಮಾಯಾಪಾಶದಲ್ಲಿ, ಘಾಸಿಯಾಗದೆ ಮಾಣ್ಬರೇ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನರಿಯದ ಜಾತ್ಯಂಧಕರು.
Transliteration Guruvendariyaru, liṅgavendariyaru,
jaṅgamavendariyaru.
Hindondanāḍuvaru, mundondanāḍuvaru.
Matte, nambade, bhaktarante, pādōdaka
prasādakke kaiyyanānuvaru.
Īśa vēṣava toṭṭa, vēṣadhārakaru, tāve, bhaktarembaru.
Ivaru, māyāpāśadalli, ghāsiyāgade māṇbarē?
Nijaguru svatantrasid'dhaliṅgēśvarananariyada jātyandhakaru.