ಊರ್ಧ್ವಮುಖವಾದ, ಅನಂತೇಶನೆಂಬ ವಾಸುಕಿಯ
ಶಿರದ ಮೇಲಿಹ ಅಷ್ಟದಳಾಬ್ಜ ಮಧ್ಯದಲ್ಲಿ,
ಒಪ್ಪುತ್ತಿಹ ಶುದ್ಧವಿದ್ಯೆಯೇ ಪೀಠವಾದ
ಶಿವಲಿಂಗವೊಂದರಲ್ಲಿ, ದೃಢಭಕ್ತಿಯುಳ್ಳಾತನ ದೇಹವೇ
ಲಿಂಗದೇಹವು.
ಆ ಚಿದ್ರೂಪನಾದ ಪರಮ ಸ್ವರೂಪನ ಮೂರ್ತಿ
ತಾನೇ ಇಷ್ಟಲಿಂಗವು.
ಆ ಇಷ್ಟಲಿಂಗದಲ್ಲಿ ದೇಹವನಡಗಿಸಿದ ಮಹಾತ್ಮನ
ಮನ ಬುದ್ಧಿ ಅಹಂಕಾರ ಇಂದ್ರಿಯಾದಿ ಗುಣಂಗಳು
ಜನನಾದಿ ವಿಕಾರಂಗಳ ಹೊದ್ದವಾಗಿ, ಆತ ನಿರ್ದೇಹಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ
ಶರಣನುಪಮಾತೀತನು.
Transliteration Ūrdhvamukhavāda, anantēśanemba vāsukiya
śirada mēliha aṣṭadaḷābja madhyadalli,
opputtiha śud'dhavidyeyē pīṭhavāda
śivaliṅgavondaralli, dr̥ḍhabhaktiyuḷḷātana dēhavē
liṅgadēhavu.
Ā cidrūpanāda parama svarūpana mūrti
tānē iṣṭaliṅgavu.
Ā iṣṭaliṅgadalli dēhavanaḍagisida mahātmana
mana bud'dhi ahaṅkāra indriyādi guṇaṅgaḷu
jananādi vikāraṅgaḷa hoddavāgi, āta nirdēhi,
nijaguru svatantrasid'dhaliṅgēśvarana
śaraṇanupamātītanu.