ಶುದ್ಧಾನ್ನಪಾನಾದಿಗಳನು
ಮಂತ್ರಭಸ್ಮದಿಂದ ಪವಿತ್ರವ ಮಾಡಿ,
ಪತಿಭಕ್ತಿಯಿಂದ ಲಿಂಗಮುಖಕ್ಕೆ ಸಮರ್ಪಿಸಿ,
ತಾ ಸ್ವಾದಿಸುವದು.
ತನ್ನ ರಸನೆಯ ಲಿಂಗದ ರಸನೆಯೆಂದು ಸವಿದು,
ಪ್ರಸಾದತೃಪ್ತಿಯ ಪಡೆದಾತನೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ
ನಿತ್ಯಸುಖಿಯಾದಾತನು.
Transliteration Śud'dhānnapānādigaḷanu
mantrabhasmadinda pavitrava māḍi,
patibhaktiyinda liṅgamukhakke samarpisi,
tā svādisuvadu.
Tanna rasaneya liṅgada rasaneyendu savidu,
prasādatr̥ptiya paḍedātane,
nijaguru svatantrasid'dhaliṅgēśvaranalli
nityasukhiyādātanu.