•  
  •  
  •  
  •  
Index   ವಚನ - 226    Search  
 
ಅಯ್ಯಾ ನಿನ್ನ ಭಕ್ತನು ನಿನ್ನನಲ್ಲದೆ ಕೇಳನಾಗಿ, ಆತನ ಶ್ರೋತ್ರದಲ್ಲಿ ನಿನ್ನ ಶೋತ್ರಪ್ರಸಾದವ ತುಂಬುವೆ. ನಿನ್ನ ಭಕ್ತನು ನಿನ್ನನಲ್ಲದೆ ಸೋಂಕನಾಗಿ, ಆತನ ಕಾಯದಲ್ಲಿ ನಿನ್ನ ಕಾಯಪ್ರಸಾದವ ತುಂಬುವೆ. ನಿನ್ನ ಭಕ್ತನು ನಿನ್ನನಲ್ಲದೆ ಕಾಣನಾಗಿ, ಆತನ ನೇತ್ರದಲ್ಲಿ ನಿನ್ನ ನೇತ್ರಪ್ರಸಾದವ ತುಂಬುವೆ. ನಿನ್ನ ಭಕ್ತನು ನಿನ್ನನಲ್ಲದೆ ನುತಿಸನಾಗಿ, ಆತನ ಜಿಹ್ವೆಯಲ್ಲಿ ನಿನ್ನ ಜಿಹ್ವಾಪ್ರಸಾದವ ತುಂಬುವೆ. ನಿನ್ನ ಭಕ್ತನು ನಿನ್ನ ಸದ್ವಾಸನೆಯನಲ್ಲದೆ ಅರಿಯನಾಗಿ, ಆತನ ಘ್ರಾಣದಲ್ಲಿ ನಿನ್ನ ಘ್ರಾಣಪ್ರಸಾದವ ತುಂಬುವೆ. ಈ ಪರಿಯಲ್ಲಿ ಪ್ರಸಾದಿಗೆ ನಿನ್ನ ಪ್ರಸಾದವನಿತ್ತು ಸಲಹಿದೆಯಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.
Transliteration Ayyā ninna bhaktanu ninnanallade kēḷanāgi, ātana śrōtradalli ninna śōtraprasādava tumbuve. Ninna bhaktanu ninnanallade sōṅkanāgi, ātana kāyadalli ninna kāyaprasādava tumbuve. Ninna bhaktanu ninnanallade kāṇanāgi, ātana nētradalli ninna nētraprasādava tumbuve. Ninna bhaktanu ninnanallade nutisanāgi, ātana jihveyalli Ninna jihvāprasādava tumbuve. Ninna bhaktanu ninna sadvāsaneyanallade ariyanāgi, ātana ghrāṇadalli ninna ghrāṇaprasādava tumbuve. Ī pariyalli prasādige ninna prasādavanittu salahideyayyā, nijaguru svatantrasid'dhaliṅgēśvara.