ನಿತ್ಯಾನಂದ ಸಂವಿದಾಕಾರ ಜ್ಯೋತಿರ್ಲಿಂಗ
ಮೂರ್ತಿಯಾದ ಶಿವನು
ಜಲ ಗಂಧ ಅಕ್ಷತೆ ಪತ್ರೆ ಪುಷ್ಪ ಧೂಪ ದೀಪ
ನೈವೇದ್ಯ ತಾಂಬೂಲಂಗಳಿಂದ
ಪೂಜೆ ಮಾಡುವ ಪೂಜಕರ ಭಾವಕ್ಕೆ ಸಿಲುಕವನಲ್ಲ ನೋಡಾ.
ಮತ್ತೆಂತೆಂದಡೆ:
ಭಾವವ ಬಲಿದು ನೆನಹ ನೇತಿಗೊಳಿಸಿ,
ಜ್ಞಾನಪೂಜೆಯ ಮಾಡುವ ಮಹಂತರಿಗೆ ಸಿಲ್ಕುವ,
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
Transliteration Nityānanda sanvidākāra jyōtirliṅga
mūrtiyāda śivanu
jala gandha akṣate patre puṣpa dhūpa dīpa
naivēdya tāmbūlaṅgaḷinda
pūje māḍuva pūjakara bhāvakke silukavanalla nōḍā.
Mattentendaḍe:
Bhāvava balidu nenaha nētigoḷisi,
jñānapūjeya māḍuva mahantarige silkuva,
nam'ma nijaguru svatantrasid'dhaliṅgēśvaranu.