ಸ್ಥಾವರ ಜಂಗಮಾತ್ಮಕವಾದ ಸಮಸ್ತ ಲೋಕವನು
ಸುಜ್ಞಾನವಿಚಾರವಿಡಿದು ಗ್ರಹಿಸಿ,
ತಾನು ಗ್ರಹಿಸಿದ ಲೋಕವು,
ಸೂತ್ರದಲ್ಲಿಯೆ ಮಣಿಗಣದಂತೆ
ಶಿವನಾಧಾರವಾಗಿಹೆನೆಂದರಿದು,
ಅಂಥಾ ಲೋಕಾಧಾರವಾದ
ಶಿವನ ನಿರ್ಮಲ ಸಾತ್ವಿಕಗುಣಿಗಳಾದ
ಶಿವಜ್ಞಾನಿಗಳು ಕಂಡು ಸಮಾಧಿನಿಷ್ಠರಾಗಿಹರು,
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣರು.
Transliteration Sthāvara jaṅgamātmakavāda samasta lōkavanu
sujñānavicāraviḍidu grahisi,
tānu grahisida lōkavu,
sūtradalliye maṇigaṇadante
śivanādhāravāgihenendaridu,
anthā lōkādhāravāda
śivana nirmala sātvikaguṇigaḷāda
śivajñānigaḷu kaṇḍu samādhiniṣṭharāgiharu,
nam'ma nijaguru svatantrasid'dhaliṅgēśvarana śaraṇaru.