•  
  •  
  •  
  •  
Index   ವಚನ - 427    Search  
 
ಚಂದ್ರ ಚಂದ್ರಿಕೆಯಂತೆ, ಅಗ್ನಿ ಉಷ್ಣದಂತೆ, ರತ್ನ ಕಾಂತಿಯಂತೆ, ಬ್ರಹ್ಮವ ಬಿಡದೆ ತೋರುವ ಬ್ರಹ್ಮಶಕ್ತಿ ಬ್ರಹ್ಮದ ಅಂತಃಕರಣವಾದ ಕಾರಣ ವಿಶ್ವಭಾಜನವೆನಿಸಿತ್ತು. ಬೀಜದಲ್ಲಿ ವೃಕ್ಷ ಪತ್ರೆ ಫಲಂಗಳು ತೋರುವಂತೆ, ಬ್ರಹ್ಮದ ಹೃದಯಬೀಜದಲ್ಲಿ ವಿಶ್ವವು ತೋರುವುದಾಗಿ, ಆ ವಿಶ್ವಭಾಜನವಾದ ಚಿತ್ತೇ ತನ್ನ ಸ್ವರೂಪವೆಂದು ಕಂಡ ಜೀವನ್ಮುಕ್ತಂಗೆ ವಿಧಿ-ನಿಷೇಧ, ಸಂಕಲ್ಪ- ವಿಕಲ್ಪ, ಪ್ರಕೃತಿ-ವಿಕೃತಿ ಮೊದಲಾದ ಜಗದ್ವ್ಯಾಪಾರವೆಂಬುದೇನೂ ಇಲ್ಲ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣ ನಿಮ್ಮ ಕೂಡಿ ನಿಮ್ಮಂತಿಹನು.
Transliteration Candra candrikeyante, agni uṣṇadante, ratna kāntiyante, brahmava biḍade tōruva brahmaśakti brahmada antaḥkaraṇavāda kāraṇa viśvabhājanavenisittu. Bījadalli vr̥kṣa patre phalaṅgaḷu tōruvante, brahmada hr̥dayabījadalli viśvavu tōruvudāgi, ā viśvabhājanavāda cittē tanna svarūpavendu kaṇḍa jīvanmuktaṅge vidhi-niṣēdha, saṅkalpa- vikalpa, prakr̥ti-vikr̥ti modalāda jagadvyāpāravembudēnū illa, nijaguru svatantrasid'dhaliṅgēśvarā, nim'ma śaraṇa nim'ma kūḍi nim'mantihanu.