ಸಾಗರದ ತಡಿಯಲ್ಲಿ ಒಂದು ಆರವೆ.
ಆರವೆಯ ಬೇರಿನಲ್ಲಿ ಮೂರುಲೋಕ.
ಲೋಕದೊಳಗೆ ಹೊತ್ತು ಬೆವಹಾರ ಮಾಡುವ ಅಣ್ಣಗಳೆಲ್ಲರೂ
ಹೇರಿನ ಮೂಲೆಗೆ ತೋಳಕೊಟ್ಟು,
ಅಳೆವ ಕೊಳಗಕ್ಕೆ ಕೈಯನಿಕ್ಕಿದರು.
ಗಡಿವಾಡದ ಸುಂಕವ ಕದ್ದು ಹೋಗಲರಿಯದೆ
ಬಂಕೇಶ್ವರಲಿಂಗವನರಿಯಿರಣ್ಣಾ.
Transliteration Sāgarada taḍiyalli ondu ārave.
Āraveya bērinalli mūrulōka.
Lōkadoḷage hottu bevahāra māḍuva aṇṇagaḷellarū
hērina mūlege tōḷakoṭṭu,
aḷeva koḷagakke kaiyanikkidaru.
Gaḍivāḍada suṅkava kaddu hōgalariyade
baṅkēśvaraliṅgavanariyiraṇṇā.