ಅಂಬುಧಿಯಲ್ಲಿ ಹಡಗು ಬರುತ್ತಿರಲಾಗಿ,
ಹಡಗಿನ ಕುಕ್ಕೊಂಬಿನ ಮೇಲೆ ಒಂದು ಕರಡಿ ಬಂದಿತ್ತು.
ಆ ಕರಡಿಗೆ ಕಾಲು ಮೂರು, ಕಣ್ಣು ಒಂದು, ಬಾಲ ಕಡೆಯಿಲ್ಲ.
ಬಂಕೇಶ್ವರಲಿಂಗಕ್ಕೆ ಹಡಗಿನ ಸುಂಕ ಕಡೆನಡುವಿಲ್ಲ.
Transliteration Ambudhiyalli haḍagu baruttiralāgi,
haḍagina kukkombina mēle ondu karaḍi bandittu.
Ā karaḍige kālu mūru, kaṇṇu ondu, bāla kaḍeyilla.
Baṅkēśvaraliṅgakke haḍagina suṅka kaḍenaḍuvilla.