•  
  •  
  •  
  •  
Index   ವಚನ - 22    Search  
 
ವೇಷ ಲಾಂಛನವೆಂಬ ಪಾಠದ ಹೊರೆಯ ಹೊತ್ತು, ಬೆವಹಾರ ಮಾಡುವ ಹರದಿಗರೆಲ್ಲರೂ ಹರದಿಗರಲ್ಲಾ ಹರವರಿಯಲ್ಲಿ. ಉಭಯಮಾರ್ಗವ ಬಿಟ್ಟು, ವೇಷತನದ ಕಳ್ಳಹಾದಿಯಲ್ಲಿ ಹೋಗಿ ಸಿಕ್ಕಿದಿರಿ, ಕಾಲನ ಕಾಲಾಟಕ್ಕೆ ಬಂಕೇಶ್ವರಲಿಂಗಕ್ಕೆ ಅರಿವಿನ ಸುಂಕದ ಪಥವ ತಪ್ಪಿ.
Transliteration Vēṣa lān̄chanavemba pāṭhada horeya hottu, bevahāra māḍuva haradigarellarū haradigarallā haravariyalli. Ubhayamārgava biṭṭu, vēṣatanada kaḷḷahādiyalli hōgi sikkidiri, kālana kālāṭakke baṅkēśvaraliṅgakke arivina suṅkada pathava tappi.