ಬ್ರಹ್ಮನ ಕುದುರೆಯ ಮಾಡಿ, ವಿಷ್ಣುವ ಹೇರ ಮಾಡಿ,
ಸಕಲ ಭೋಗೋಪಭೋಗಂಗಳೆಲ್ಲವ ಸರಕ ಮಾಡಿ,
ಶ್ರದ್ಧೆ ನಿಬದ್ಧಿಯೆಂಬ ರುದ್ರ ಮಾರುತ್ತಿರಲಾಗಿ,
ವಿರಕ್ತಿಯೆಂಬ ಚೀಟಿಗೆ ಒಪ್ಪವಿಲ್ಲದಿರಲು,
ಅಲ್ಲಿ ಸಿಕ್ಕಿದ ಅಂತಕನ ಕೋಲುಕಾರಂಗೆ,
ಬಂಕೇಶ್ವರಲಿಂಗನ ಒಪ್ಪವಿಲ್ಲದ ಕಾರಣ.
Transliteration Brahmana kudureya māḍi, viṣṇuva hēra māḍi,
sakala bhōgōpabhōgaṅgaḷellava saraka māḍi,
śrad'dhe nibad'dhiyemba rudra māruttiralāgi,
viraktiyemba cīṭige oppavilladiralu,
alli sikkida antakana kōlukāraṅge,
baṅkēśvaraliṅgana oppavillada kāraṇa.