ಹುಳ್ಳಿ ಹಳ್ಳದಲ್ಲಿ ಹೋಗುತ್ತಿರೆ,
ನೀರು ತಾಗಿ ಅಲ್ಲಾಡದಿಹುದೆ?
ಸಂಸಾರಸಾಗರಮಧ್ಯದಲ್ಲಿ ವಾಸವಾಗಿದ್ದ ಆತ್ಮ,
ಸಂಸಾರದ ಪಾಶ ತಾಗಿ ಓಸರಿಸದಿಹುದೆ?
ರಸತಾಗಿದ ರಸ ಪಾವಕಂಗೆ ಹುಸಿಯಾದಂತೆ,
ಅಸು ಘಟಯೋಗ ಅದರ ದೆಸೆಯಂತೆ ಇರಬೇಕು,
ಹುಸಿ ದಿಟದಂತಿರಬೇಕು, ಬಂಕೇಶ್ವರಲಿಂಗವನರಿವುದಕ್ಕೆ.
Transliteration Huḷḷi haḷḷadalli hōguttire,
nīru tāgi allāḍadihude?
Sansārasāgaramadhyadalli vāsavāgidda ātma,
sansārada pāśa tāgi ōsarisadihude?
Rasatāgida rasa pāvakaṅge husiyādante,
asu ghaṭayōga adara deseyante irabēku,
husi diṭadantirabēku, baṅkēśvaraliṅgavanarivudakke.
Music
Courtesy: