•  
  •  
  •  
  •  
Index   ವಚನ - 59    Search  
 
ಫಳ ಒಳಗೆ ಕೊಳೆತು, ಹೊರಗೆ ಈಡಾದಡೆ, ಮೆಲುವರಿಗೆ ಅಡಹೆ ? ಹೊರಗೊಣಗಿ, ಒಳಗೆ ಫಳ ರಸಭರಿತವಾಗಿ, ಭುಂಜಿಸುವರ ಅಂಗ ಮನೋಹರವಾಗಿಪ್ಪುದು. ಲೌಕಿಕ ಪರಮಾರ್ಥಂಗಳ ಭೇದ, ಉಭಯರೂಪು ನಿಬದ್ಧಿಯಾದಲ್ಲಿ, ಬಂಕೇಶ್ವರಲಿಂಗವು ಎಂತಿದ್ದಡೇನು?
Transliteration Phaḷa oḷage koḷetu, horage īḍādaḍe, meluvarige aḍahe? Horagoṇagi, oḷage phaḷa rasabharitavāgi, bhun̄jisuvara aṅga manōharavāgippudu. Laukika paramārthaṅgaḷa bhēda, ubhayarūpu nibad'dhiyādalli, baṅkēśvaraliṅgavu entiddaḍēnu?