ಹರಿಗೆಯ ಹಿಡಿದು ರಣವ ಹೊಕ್ಕಲ್ಲಿ,
ತನ್ನೆಡೆಗೆ ಮರೆಯಹ ತೆರದಂತೆ,
ತನ್ನಯ ಸತ್ಕ್ರೀ ಭಕ್ತಿಮಾರ್ಗದ ಮಾಟಕೂಟದಿರವು.
ತಾ ಮಾಡುವಲ್ಲಿ ಇದಿರ ರೂಪ ನೋಡಲಿಲ್ಲ.
ಅರಿಕೆಯಲ್ಲಿ ಉಭಯವನರಿಯಬೇಕು.
ಎಲೆಯ ಮರೆಯ ಕಾಯನರಿದಂತೆ,
ದರ್ಶನದ ಮರೆಯ ಅರಿವನರಿಯಬೇಕು,
ಬಂಕೇಶ್ವರಲಿಂಗವನರಿವುದಕ್ಕೆ.
Transliteration Harigeya hiḍidu raṇava hokkalli,
tanneḍege mareyaha teradante,
tannaya satkrī bhaktimārgada māṭakūṭadiravu.
Tā māḍuvalli idira rūpa nōḍalilla.
Arikeyalli ubhayavanariyabēku.
Eleya mareya kāyanaridante,
darśanada mareya arivanariyabēku,
baṅkēśvaraliṅgavanarivudakke