•  
  •  
  •  
  •  
Index   ವಚನ - 41    Search  
 
ಆಶನ ವಸನಕ್ಕಾಗಿ ಒಂದು ಪಶುವು ಹುಟ್ಟಿತ್ತು. ತನ್ನ ಸುಖವನರಿಯಲಾಗಿ, ತನಗೊಂದು ಶಿಶು ಹುಟ್ಟಿತ್ತು. ಆ ಶಿಶುವಿನ ಮೇಲಣ ಮೋಹದಿಂದ, ಮೊಲೆಯಲ್ಲಿ ಅಮೃತ ಹುಟ್ಟಿತ್ತು. ಅಮೃತವ ಸೇವಿಸಿ, ಆ ಶಿಶುವು ನಲಿದಾಡುವುದ ಕಂಡು, ನಾನದರ ಬೆಂಬಳಿವಿಡಿದು ಹೋಗಿ, ಅದು ಕೊಂಬ ಅಮೃತವ ನಾ ಕೊಳ್ಳಲಾಗಿ, ಪರಮಸುಖಪರಿಣಾಮ ತಲೆದೋರಿತ್ತು . ಅದರ ನೆಲೆವಿಡಿದು, ತಲೆಹೊಲನನೇರಿ ನೋಡಲಾಗಿ, ಉಲುಹು ಅಡಗಿತ್ತು. ಪುರುದಗಲಕೆ ನಿಂದಿತ್ತು. ಇಳಿದುಬರುವುದಕ್ಕೆ ಹಾದಿಯ ಕಾಣದೆ, ಅದರಲ್ಲಿಯೇ ನಿರ್ಮುಕ್ತನಾದೆನಯ್ಯಾ. ಬಸವಪ್ರಿಯ ಕೂಡಲಚೆನ್ನಬಸವಣ್ಣ,
Transliteration Āśana vasanakkāgi ondu paśuvu huṭṭittu. Tanna sukhavanariyalāgi, tanagondu śiśu huṭṭittu. Ā śiśuvina mēlaṇa mōhadinda, moleyalli amr̥ta huṭṭittu. Amr̥tava sēvisi, ā śiśuvu nalidāḍuvuda kaṇḍu, nānadara bembaḷiviḍidu hōgi, adu komba amr̥tava nā koḷḷalāgi, paramasukhapariṇāma taledōrittu. Adara neleviḍidu, taleholananēri nōḍalāgi, uluhu aḍagittu. Purudagalake nindittu. Iḷidubaruvudakke hādiya kāṇade, adaralliyē nirmuktanādenayyā. Basavapriya kūḍalacennabasavaṇṇa,