•  
  •  
  •  
  •  
Index   ವಚನ - 42    Search  
 
ಆಕಾಶವ ನೂಕುತ್ತಿಯ ಹಾಗೆ ಅಟಗೋಲ ಹಂಗುಂಟೆ? ಏಕ ಮನವ ನಿಲಿಸುವರೆ, ಬೇರೊಂದು ಸಾಕಾರ ಉಂಟೆ? ಬೇಕು ಬೇಡೆಂಬವೆರಡಳಿದವಂಗೆ, ಇಹಲೋಕದ ಹಂಗುಂಟೆ? ಈ ಜೋಕೆ ನಿಮ್ಮೊಳು ಏಕವಾಗಿಹ ಶರಣಂಗಲ್ಲದೆ, ಲೋಕದ ಮಾನವರಿಗುಂಟೆ? ನಿಮ್ಮ ನೆಲೆಯನರಿವುದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Transliteration Ākāśava nūkuttiya hāge aṭagōla haṅguṇṭe? Ēka manava nilisuvare, bērondu sākāra uṇṭe? Bēku bēḍembaveraḍaḷidavaṅge, ihalōkada haṅguṇṭe? Ī jōke nim'moḷu ēkavāgiha śaraṇaṅgallade, lōkada mānavariguṇṭe? Nim'ma neleyanarivudu, basavapriya kūḍalacennabasavaṇṇā.