•  
  •  
  •  
  •  
Index   ವಚನ - 231    Search  
 
ಹಾಕಿದ ಮುಂಡಿಗೆಯ ಎತ್ತುವರಿಲ್ಲ. ಎತ್ತಿದ ಮುಂಡಿಗೆಯ ದೃಷ್ಟದಲ್ಲಿ, ಶ್ರುತದಲ್ಲಿ ಗೆದ್ದು, ಇಸಕೊಂಬವರಿಲ್ಲ. ಈ ಉಭಯದ ಗೊತ್ತನರಿಯದೆ ಕೆಟ್ಟರು, ನಾವು ಭಕ್ತ ಜಂಗಮರೆಂಬುವರೆಲ್ಲ. ಅದಂತಿರಲಿ. ನಾನು ನೀನು ಎಂಬುಭಯದ ಗೊತ್ತನರಿದು, ದೃಷ್ಟದಲ್ಲಿ ಶ್ರುತದಲ್ಲಿ ಗೆದ್ದು ಕೊಟ್ಟು, ನ್ಯಾಯದಲ್ಲಿ ಜಗವನೊಡಂಬಡಿಸಿ ಕೊಟ್ಟು, ಆ ಸಿಕ್ಕಿಹೋಗುವ ಮುಂಡಿಗೆಯ ಎತ್ತಿಕೊಂಡು, ಸುತ್ತಿ ನೋಡಿದರೆ ಬಟ್ಟಬಯಲಾಗಿರ್ದಿತ್ತು. ಆ ಬಟ್ಟಬಯಲ ದಿಟ್ಟಿಸಿ ನೋಡಲು, ನೆಟ್ಟಗೆ ಹೋಗುತ್ತಿದೆ. ಹೋಗಹೋಗುತ್ತ ನೋಡಿದರೆ, ನಾ ಎತ್ತ ಹೋದೆನೆಂದರಿಯೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
Transliteration Hākida muṇḍigeya ettuvarilla. Ettida muṇḍigeya dr̥ṣṭadalli, śrutadalli geddu, isakombavarilla. Ī ubhayada gottanariyade keṭṭaru, nāvu bhakta jaṅgamarembuvarella. Adantirali. Nānu nīnu embubhayada gottanaridu, dr̥ṣṭadalli śrutadalli geddu koṭṭu, n'yāyadalli jagavanoḍambaḍisi koṭṭu, ā sikkihōguva muṇḍigeya ettikoṇḍu, sutti nōḍidare baṭṭabayalāgirdittu. Ā baṭṭabayala diṭṭisi nōḍalu, neṭṭage hōguttide. Hōgahōgutta nōḍidare, nā etta hōdenendariyenayyā, basavapriya kūḍalacennabasavaṇṇa.