ಹಾಲ ಕಂಡ ಬೆಕ್ಕು ಮೆಲ್ಲುಲಿ ತೆಗೆದು ಕುಡಿವುತ್ತಿರಲು,
ಬಾಲನಿಗಿರ್ದ ಹಾಲ ಬೆಕ್ಕು
ಕುಡಿವುತ್ತಿದೆಯೆಂದು ನಾರಿ ಕಂಡು,
ಗುದಿಗೆಯಲಿ ಹೊಡೆದರೆ, ಏಳುತ್ತ
ಬೀಳುತ್ತ ಕಾಲ್ಗೆಡೆದು ಓಡುವಂತೆ,
ಏನ ಹೇಳುವೆಯಯ್ಯ?
ಮರ್ತ್ಯದ ಮನುಜರು ಕರಣಂಗಳ ಹರಿಯ ಬಿಟ್ಟು,
ತಮ್ಮ ಬಾಳುವೆಯ ಮರೆದು,
ಕಾಲನ ಬಾಯಲ್ಲಿ ಅಳುತ್ತ ಮುಳುಗುತ್ತಲಿಪ್ಪುದನಾರೂ
ಅರಿಯರು ನೋಡಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ?
Transliteration Hāla kaṇḍa bekku melluli tegedu kuḍivuttiralu,
bālanigirda hāla bekku
kuḍivuttideyendu nāri kaṇḍu,
gudigeyali hoḍedare, ēḷutta
bīḷutta kālgeḍedu ōḍuvante,
ēna hēḷuveyayya?
Martyada manujaru karaṇaṅgaḷa hariya biṭṭu,
tam'ma bāḷuveya maredu,
kālana bāyalli aḷutta muḷuguttalippudanārū
ariyaru nōḍā,
basavapriya kūḍalacennabasavaṇṇā?