•  
  •  
  •  
  •  
Index   ವಚನ - 88    Search  
 
ಸೂತಕವುಳ್ಳನ್ನಕ ಲಿಂಗಾರ್ಚನೆಯಿಲ್ಲ. ಪಾತಕವುಳ್ಳನ್ನಕ ಜಂಗಮಾರ್ಚನೆಯಿಲ್ಲ. ಸೂತಕ ವಿರಹಿತ ಲಿಂಗಾರ್ಚನೆ. ಪಾತಕ ವಿರಹಿತ ಜಂಗಮಾರ್ಚನೆ. ಸೂತಕ ಲಿಂಗಾರ್ಚನೆಯ ಕಡೆಸಿತ್ತು ಪಾತಕ ಜಂಗಮಾರ್ಚನೆಯ ಕೆಡಿಸಿತ್ತು. ಇಂತು ಸೂತಕ ಪಾತಕ ಎರಡೂ ಇಲ್ಲ, ಕೂಡಲಚೆನ್ನಸಂಗನ ಶರಣಂಗೆ.
Transliteration Sūtakavuḷḷannaka liṅgārcaneyilla. Pātakavuḷḷannaka jaṅgamārcaneyilla. Sūtaka virahita liṅgārcane. Pātaka virahita jaṅgamārcane. Sūtaka liṅgārcaneya kaḍesittu pātaka jaṅgamārcaneya keḍisittu. Intu sūtaka pātaka eraḍū illa, kūḍalacennasaṅgana śaraṇaṅge.