•  
  •  
  •  
  •  
Index   ವಚನ - 89    Search  
 
ನಾನು ಮೆಟ್ಟುವ ಭೂಮಿಯ ಭಕ್ತನ ಮಾಡಿದಲ್ಲದೆ ಮೆಟ್ಟೆನಯ್ಯಾ. ನಾ ನೋಡುತಿಹ ಆಕಾಶದ ಚಂದ್ರಸೂರ್ಯರ ಭಕ್ತರ ಮಾಡಿದಲ್ಲದೆ ನಾ ನೋಡೆನಯ್ಯಾ. [ನಾನು ಬಳಸುವ] ಜಲವ ಭಕ್ತನ ಮಾಡಿದಲ್ಲದೆ ನಾನು ಬಳಸೆನಯ್ಯಾ, ನಾನು ಕೊಂಬ ಹದಿನೆಂಟು ಧಾನ್ಯವ ಭಕ್ತನ ಮಾಡಿದಲ್ಲದೆ ಕೊಳ್ಳೆನು ಕೂಡಲಚೆನ್ನಸಂಗಾ ನಿಮ್ಮಾಣೆ.
Transliteration Nānu meṭṭuva bhūmiya bhaktana māḍidallade meṭṭenayyā. Nā nōḍutiha ākāśada candrasūryara bhaktara māḍidallade nā nōḍenayyā. [Nānu baḷasuva] jalava bhaktana māḍidallade nānu baḷasenayyā, nānu komba hadineṇṭu dhān'yava bhaktana māḍidallade koḷḷenu kūḍalacennasaṅgā nim'māṇe.