ಹದಿನಾರು ತೆರದಿಂದ ಭಕ್ತಿಯ ಮಾಡುವೆನು,
ಷೋಡಶೋಪಚಾರಂಗಳನೆ ಮಾಡುವೆನು,
ಬಂದುದಕ್ಕೆ ಪರಿಣಾಮವ ಕೊಡುವೆನು,
ಇದ್ದುದಕ್ಕೆ ಇಂಬುಗೊಡುವೆನು,
ಆಯತದಿಂದ ಲಿಂಗಾರ್ಚನೆಯ ಮಾಡುವೆನು,
ಸ್ವಾಯತದಿಂದ ಲಿಂಗಭೋಗೋಪಭೋಗವ ಮಾಡುವೆನು.
ಅನರ್ಪಿತಂಗಳ ಮುಟ್ಟಲೀಯದೆ,
ಗುರುಪ್ರಸಾದಕ್ಕೆ ತನುವ ಇಂಬುಕೊಟ್ಟು,
ಲಿಂಗ ಪ್ರಸಾದಕ್ಕೆ ಮನವ ಇಂಬುಕೊಟ್ಟು,
ಜಂಗಮ ಪ್ರಸಾದಕ್ಕೆ ಪ್ರಾಣವ ಇಂಬುಕೊಟ್ಟು
ಇಂತೀ ತ್ರಿವಿಧ ನಿರ್ಣಯದಲ್ಲಿ ನೇಮಿಸಿ ನಡೆವೆ,
ಕೂಡಲಚೆನ್ನಸಂಗಯ್ಯಾ, ನೀವು ಮುಂತಾಗಿ.
Transliteration Hadināru teradinda bhaktiya māḍuvenu,
ṣōḍaśōpacāraṅgaḷane māḍuvenu,
bandudakke pariṇāmava koḍuvenu,
iddudakke imbugoḍuvenu,
āyatadinda liṅgārcaneya māḍuvenu,
svāyatadinda liṅgabhōgōpabhōgava māḍuvenu.
Anarpitaṅgaḷa muṭṭalīyade,
guruprasādakke tanuva imbukoṭṭu,
liṅga prasādakke manava imbukoṭṭu,
jaṅgama prasādakke prāṇava imbukoṭṭu
intī trividha nirṇayadalli nēmisi naḍeve,
kūḍalacennasaṅgayyā, nīvu muntāgi.