ಕೆರೆ ಬಾವಿ ತೊರೆಯಲ್ಲಿ ಕಂಡರೆ ಉದಕವೆಂಬೆ,
ಮನೆಗೆ ತಂದರೆ ಅಗ್ಘವಣಿಯೆಂಬೆ.
ಅಂಗಡಿಯಲ್ಲಿ ಕಂಡರೆ ಭತ್ತವೆಂಬೆ,
ಮನೆಗೆ ತಂದರೆ ಸಯದಾನವೆಂಬೆ.
ಮಾಡುವಲ್ಲಿ, ನೀಡುವಲ್ಲಿ ಬೋನವೆಂಬೆ.
ಕೊಂಬಲ್ಲಿ ಕೊಡುವಲ್ಲಿ ಪ್ರಸಾದವೆಂದು ಕೈಕೊಂಡು,
ಅಂಜಿ ಎಂಜಲೆಂದರೆ
ಅಂದೇ ವ್ರತಗೇಡಿ ಕೂಡಲಚೆನ್ನಸಂಗಯ್ಯಾ.
Transliteration Kere bāvi toreyalli kaṇḍare udakavembe,
manege tandare agghavaṇiyembe.
Aṅgaḍiyalli kaṇḍare bhattavembe,
manege tandare sayadānavembe.
Māḍuvalli, nīḍuvalli bōnavembe.
Komballi koḍuvalli prasādavendu kaikoṇḍu,
an̄ji en̄jalendare
andē vratagēḍi kūḍalacennasaṅgayyā.