•  
  •  
  •  
  •  
Index   ವಚನ - 144    Search  
 
ಭವಿ ಮಾಡಲಿಕೆ ಪೃಥ್ವಿಯಾಯಿತ್ತು, [ಭವಿ ಮಾಡಲಿಕೆ ಅಪ್ಪುವಾಯಿತ್ತು, ಭವಿ ಮಾಡಲಿಕೆ ತೇಜವಾಯಿತ್ತು, ಭವಿ ಮಾಡಲಿಕೆ ವಾಯುವಾಯಿತ್ತು], ಭವಿ ಮಾಡಲಿಕೆ ಆಕಾಶವಾಯಿತ್ತು, ಭವಿ ಮಾಡಲಿಕೆ ಸೂರ್ಯಚಂದ್ರಆತ್ಮರಾದರು. [ಭವಿ ಮಾಡಲಿಕೆ] ಬ್ರಹ್ಮ ವಿಷ್ಣು ರುದ್ರ ಮೊದಲಾದ ದೇವದಾನವ ಮಾನವರಾದರು. ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ಭವಿಯಿಂದಾಯಿತ್ತು, ಸಕಲ ಜಗವೆಲ್ಲ.
Transliteration Bhavi māḍalike pr̥thviyāyittu, [bhavi māḍalike appuvāyittu, bhavi māḍalike tējavāyittu, bhavi māḍalike vāyuvāyittu], bhavi māḍalike ākāśavāyittu, bhavi māḍalike sūryacandra'ātmarādaru. [Bhavi māḍalike] brahma viṣṇu rudra modalāda dēvadānava mānavarādaru. Idu kāraṇa kūḍalacennasaṅgayyanalli bhaviyindāyittu, sakala jagavella.