ಲಿಂಗ[ದಲ್ಲಿ] ದ್ರೋಹದವನ
ಮುಖವ ನೋಡಲಾಗದು,
ಮತ್ತೆ ನೋಡಬಹುದು, ಏಕೆ?
ಮುಂದೆ ಗುರುವಿಪ್ಪ ಕಾರಣ.
ಗುರುವಿನಲ್ಲಿ ದ್ರೋಹದವನ ಮುಖವ ನೋಡಲಾಗದು
[ಮತ್ತೆ] ನೋಡಬಹುದು, ಏಕೆ?
ಮುಂದೆ ಜಂಗಮವಿಪ್ಪ ಕಾರಣ.
ಜಂಗಮದಲ್ಲಿ ದ್ರೋಹದವನ ಮುಖವ ನೋಡಲಾಗದು,
[ಮತ್ತೆ] ನೋಡಬಹುದು, ಏಕೆ?
ಮುಂದೆ ಪ್ರಸಾದವಿಪ್ಪ ಕಾರಣ.
ಪ್ರಸಾದದಲ್ಲಿ ದ್ರೋಹದವನ ಮುಖವ ನೋಡಲಾಗದು,
ಮತ್ತೆ ನೋಡಬಹುದು [ಏಕೆ?]
ಕೂಡಲಚೆನ್ನಸಂಗಯ್ಯನಲ್ಲಿ
ಪ್ರಸಾದದಿಂದ ಪರವಿಲ್ಲವಾಗಿ.
Transliteration Liṅga[dalli] drōhadavana
mukhava nōḍalāgadu,
matte nōḍabahudu, ēke?
Munde guruvippa kāraṇa.
Guruvinalli drōhadavana mukhava nōḍalāgadu
[matte] nōḍabahudu, ēke?
Munde jaṅgamavippa kāraṇa.
Jaṅgamadalli drōhadavana mukhava nōḍalāgadu,
[matte] nōḍabahudu, ēke?
Munde prasādavippa kāraṇa.
Prasādadalli drōhadavana mukhava nōḍalāgadu,
matte nōḍabahudu [ēke?]
Kūḍalacennasaṅgayyanalli
prasādadinda paravillavāgi.