ಸಿರಿವಂತನೆಂದು ಅಡಿಗಡಿಗೆ ಕೊಂಬುದು
ಉಪಜೀವಿತಪ್ರಸಾದ,
ಬಡವನೆಂದು ಮರೆಮಗ್ಗುಲಲ್ಲಿ
ಕೊಂಬುದು ತುಡುಗುಣಿಪ್ರಸಾದ,
ಭೀತಿಯಿಲ್ಲದೆ ಸೆಳೆದುಕೊಂಬುದು ದಳದುಳಿಪ್ರಸಾದ,
ಇಕ್ಕುವಾತನ ಮನದಲ್ಲಿ ಅಳುಕು ಬಳುಕಿಲ್ಲದೆ
ಕೊಂಬಾತ ಮನದಲ್ಲಿ ಗುಡಿಗಟ್ಟಿ ಕೊಂಬುದು ಸ್ವಯಪ್ರಸಾದ,
ಇದು ಕಾರಣ, ಕೂಡಲಚೆನ್ನಸಂಗಮದೇವಾ
ನಿಮ್ಮ ಪ್ರಸಾದಿಗಳಪೂರ್ವ.
Transliteration Sirivantanendu aḍigaḍige kombudu
upajīvitaprasāda,
baḍavanendu maremaggulalli
kombudu tuḍuguṇiprasāda,
bhītiyillade seḷedukombudu daḷaduḷiprasāda,
ikkuvātana manadalli aḷuku baḷukillade
kombāta manadalli guḍigaṭṭi kombudu svayaprasāda,
idu kāraṇa, kūḍalacennasaṅgamadēvā
nim'ma prasādigaḷapūrva.