ವೇದಶಾಸ್ತ್ರ ಪುರಾಣಾಗಮಾದಿಯಾದ ಲಿಂಗವಲ್ಲದಿಲ್ಲೆಂದು
ಲಿಂಗಾರ್ಚನೆಯ ಮಾಡುವ ಮಹಾಮಹಿಮರು ನೀವು ಕೇಳಿರೇ.
ಅಂಗ ಲಿಂಗವೊ, ಆಚಾರ ಲಿಂಗವೊ, ಅನುಭಾವ ಲಿಂಗವೊ?
ಗುರು ಲಿಂಗವೊ, ಜಂಗಮ ಲಿಂಗವೊ?
ಪ್ರಸಾದ ಲಿಂಗವೊ, ಪ್ರಾಣ ಲಿಂಗವೊ, ಭಾವ ಲಿಂಗವೊ?
"ಪ್ರಾಣಲಿಂಗಸ್ಯ ಸಂಬಂಧೀ ಪ್ರಾಣಲಿಂಗೀ ಪ್ರಕೀರ್ತಿತಃ |
ಪ್ರಸನ್ನಲಿಂಗಯುಕ್ತಾತ್ಮಾ ಮಮ ರೂಪೋ ಮಹೇಶ್ವರಿ"||
ಇದು ಕಾರಣ, ಕೂಡಲಚನ್ನಸಂಗಮದೇವಾ
ಲಿಂಗನಾಮನಿರ್ಣಯವಪೂರ್ವ.
Transliteration Vēdaśāstra purāṇāgamādiyāda liṅgavalladillendu
liṅgārcaneya māḍuva mahāmahimaru nīvu kēḷirē.
Aṅga liṅgavo, ācāra liṅgavo, anubhāva liṅgavo?
Guru liṅgavo, jaṅgama liṅgavo?
Prasāda liṅgavo, prāṇa liṅgavo, bhāva liṅgavo?
Prāṇaliṅgasya sambandhī prāṇaliṅgī prakīrtitaḥ |
prasannaliṅgayuktātmā mama rūpō mahēśvari||
idu kāraṇa, kūḍalacannasaṅgamadēvā
liṅganāmanirṇayavapūrva.