ಸತಿಯ ಕೈಯಲ್ಲಿ ಕೊಟ್ಟುದು ಪ್ರಾಣಲಿಂಗವಲ್ಲ,
ಸುತನ ಕೈಯಲ್ಲಿ ಕೊಟ್ಟುದು ಪ್ರಾಣಲಿಂಗವಲ್ಲ,
ಅಲಸಿ ನಾಗವತ್ತಿಗೆಯಲಿರಿಸಿದುದು ಪ್ರಾಣಲಿಂಗವಲ್ಲ,
ತನುವ ಸೋಂಕಿ ವಜ್ರಲೇಪದಂತಿರಬೇಕು.
ಮನ ಕರದಲ್ಲಿ ಕೊಟ್ಟ ಪ್ರಾಣಲಿಂಗ ಹಿಂಗಿದರೆ,
ಅವನಂದೇ ವ್ರತಗೇಡಿ, ಕೂಡಲಚೆನ್ನಸಂಗಮದೇವಾ.
Transliteration Satiya kaiyalli koṭṭudu prāṇaliṅgavalla,
sutana kaiyalli koṭṭudu prāṇaliṅgavalla,
alasi nāgavattigeyalirisidudu prāṇaliṅgavalla,
tanuva sōṅki vajralēpadantirabēku.
Mana karadalli koṭṭa prāṇaliṅga hiṅgidare,
avanandē vratagēḍi, kūḍalacennasaṅgamadēvā.