ವಿನಾಶದೇಶದ, ವಿನಾಶ ವಿನೋದದ,
ಭಾವದ ಉತುಕುಟದ,
ಶರೀರಂಗಳ ಹೊರೆಯಲ್ಲಿ ಮೋಹಿತವಿಲ್ಲದ ಪ್ರಸಾದಿ.
ಕರಕಾಲ ಸನ್ನಿಧಿಯಲ್ಲಿ, ಸತ್ಪುರುಷರ ಸನ್ನಿಧಿಯಲ್ಲಿ.
ಭೇದವಿಲ್ಲದೆ ಬೆಳೆದ ಪ್ರಸಾದಿ,
ರಾಗದ್ವೇಷಂಗಳ ಶಬ್ದವಿಲ್ಲದ ಪ್ರಸಾದಿ.
ಇದು ಕಾರಣ, ಕೂಡಲಚೆನ್ನಸಂಗನಲ್ಲಿ
ಸದಾಸನ್ನಹಿತವಾದ ಪ್ರಸಾದಿ.
Transliteration Vināśadēśada, vināśa vinōdada,
bhāvada utukuṭada,
śarīraṅgaḷa horeyalli mōhitavillada prasādi.
Karakāla sannidhiyalli, satpuruṣara sannidhiyalli.
Bhēdavillade beḷeda prasādi,
rāgadvēṣaṅgaḷa śabdavillada prasādi.
Idu kāraṇa, kūḍalacennasaṅganalli
sadāsannahitavāda prasādi.