ಲಿಂಗಭೋಗೋಪಭೋಗದಲ್ಲಿ ಆಪ್ಯಾಯನಪ್ರಸಾದಿ.
ಶರಣ ಭೋಗೋಪಭೋಗದಲ್ಲಿ ಆಪ್ಯಾಯನಪ್ರಸಾದಿ,
ಪ್ರಸಾದ ಭೋಗೋಪಭೋಗದಲ್ಲಿ ಆಪ್ಯಾಯನಪ್ರಸಾದಿ,
ಕೊಡದ ಕೊಳದ ಉಭಯ ರಹಿತನು.
ಕ್ರೀ ಹಿಂದಾದ, ಲಿಂಗ ಮುಂದಾದ ಪ್ರಸಾದಿ.
ಪ್ರಸಾದಕ್ಕೆತಾನವಗ್ರಾಹಿ, ಪ್ರಸಾದಿ ತನಗವಗ್ರಾಹಕನು.
ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿಗೆ
ನಮೋ ನಮೋ ಎಂಬೆ.
Transliteration Liṅgabhōgōpabhōgadalli āpyāyanaprasādi.
Śaraṇa bhōgōpabhōgadalli āpyāyanaprasādi,
prasāda bhōgōpabhōgadalli āpyāyanaprasādi,
koḍada koḷada ubhaya rahitanu.
Krī hindāda, liṅga mundāda prasādi.
Prasādakketānavagrāhi, prasādi tanagavagrāhakanu.
Kūḍalacennasaṅgā nim'ma prasādige
namō namō embe.