ಶರಣ ಸತ್ತರೆ ಭಕ್ತರು ಹೊತ್ತರು,
ಪ್ರಸಾದಿಗಳತ್ತರಲ್ಲಾ,
ಸುತ್ತಲಿದ್ದ ಜಂಗಮವೆಲ್ಲಾ ಕಿಚ್ಚ ಹಿಡಿದರಲ್ಲಾ,
ಊರೊಳಗಿದ್ದವರು ಒಂಬತ್ತು ಬಾಗಿಲ
ತುಂಬಿಕೊಂಡಿದ್ದರು ನೋಡಾ!
ಮರಳಿ ಒಂದು ಬಾಗಿಲ ತೆಗೆದು, ಸತ್ತುದ ಕಂಡು,
ಅದಾರು ಅದಾರು ಸತ್ತರೆಂದು,
ಸತ್ತವರು ಬಹುದ ಕಂಡು ಇತ್ತಲೆಯಾದರಲ್ಲಾ.
ಕೂಡಲಚೆನ್ನಸಂಗ ಸತ್ತು ಸಯವಾದ.
Transliteration Śaraṇa sattare bhaktaru hottaru,
prasādigaḷattarallā,
suttalidda jaṅgamavellā kicca hiḍidarallā,
ūroḷagiddavaru ombattu bāgila
tumbikoṇḍiddaru nōḍā!
Maraḷi ondu bāgila tegedu, sattuda kaṇḍu,
adāru adāru sattarendu,
sattavaru bahuda kaṇḍu ittaleyādarallā.
Kūḍalacennasaṅga sattu sayavāda.