•  
  •  
  •  
  •  
Index   ವಚನ - 761    Search  
 
ಸತ್ತ ಹೆಣನ ಹೊತ್ತವರೆಲ್ಲಾ ಅಚ್ಚುಗಗೊಂಡರಲ್ಲಾ. ಹೊತ್ತವರೆಲ್ಲಾ ಸತ್ತುದ ಕಂಡು ಮೂರ್ಛೆವೋದರಲ್ಲಾ. ಸುತ್ತಿಬಂದಿದ್ದವರೆಲ್ಲಾ ಹೋಗಿ ಅದ ಮುಟ್ಟಲಮ್ಮರು ನೋಡಾ! ಮುಟ್ಟದ ಮುನ್ನ ಮೂವರ ಕೆಡಿಸಿತ್ತು. ಸತ್ತ ಪರಿಯ ನೋಡಾ! ಅದು ಕಾಡಿನಲ್ಲಿ ಉರಿಯದು, ಕಿಚ್ಚಿನಲ್ಲಿ ಬೇಯದು. ಸತ್ತ ಪರಿಯ ನೋಡಾ! ಕೂಡಲಚೆನ್ನಸಂಗನೆಂಬ ಚಿಂತೆ ಸತ್ತಿತಲ್ಲಾ.
Transliteration Satta heṇana hottavarellā accugagoṇḍarallā. Hottavarellā sattuda kaṇḍu mūrchevōdarallā. Suttibandiddavarellā hōgi ada muṭṭalam'maru nōḍā! Muṭṭada munna mūvara keḍisittu. Satta pariya nōḍā! Adu kāḍinalli uriyadu, kiccinalli bēyadu. Satta pariya nōḍā! Kūḍalacennasaṅganemba cinte sattitallā.