•  
  •  
  •  
  •  
Index   ವಚನ - 986    Search  
 
ಆಕಳ ಹೊಟ್ಟೆಯಲ್ಲಿ ಹೋರಿ ಹುಟ್ಟಿದಡೇನು? ಲಿಂಗಮುದ್ರೆಯನೊತ್ತುವನ್ನಕ್ಕ ಬಸವನಲ್ಲ. ಜಂಗಮದ ಆತ್ಮದಲ್ಲಿ ಪಿಂಡ ಉತ್ಪತ್ತಿಯಾದಡೇನು? ದೀಕ್ಷಿತನಾಗದನ್ನಕ್ಕ ಜಂಗಮದೇವನಲ್ಲ. ದೀಕ್ಷೆಯಿಲ್ಲದೆ ಹೋಗಿ ಭಕ್ತರಲ್ಲಿ ಅಗ್ಗಣಿಯ ಮುಕ್ಕುಳಿಸಿದಡೆ ಹಾದಿಗೊಂಡು ಹೋಗುವ ನಾಯಿ ಗಿಡದ ಮೇಲೆ ಉಚ್ಚೆಯ ಹೊಯ್ದಂತಾಯಿತ್ತು ಕಾಣಾ, ಕೂಡಲಚೆನ್ನಸಂಗಮದೇವಾ.
Transliteration Ākaḷa hoṭṭeyalli hōri huṭṭidaḍēnu? Liṅgamudreyanottuvannakka basavanalla. Jaṅgamada ātmadalli piṇḍa utpattiyādaḍēnu? Dīkṣitanāgadannakka jaṅgamadēvanalla. Dīkṣeyillade hōgi bhaktaralli aggaṇiya mukkuḷisidaḍe hādigoṇḍu hōguva nāyi giḍada mēle ucceya hoydantāyittu kāṇā, kūḍalacennasaṅgamadēvā.