•  
  •  
  •  
  •  
Index   ವಚನ - 1009    Search  
 
ಆದಿಯಲ್ಲಿ ಹುಟ್ಟಿತ್ತಲ್ಲ, ಅನಾದಿಯಲ್ಲಿ ಬೆಳೆಯಿತ್ತಲ್ಲ; ಮೂರ್ತಿಯಲ್ಲಿ ನಿಂದುದಲ್ಲ, ಅ ಮೂರ್ತಿಯಲ್ಲಿ ಭಾವಿಯಲ್ಲ; ಅರಿವಿನೊಳಗೆ ಅರಿದುದಲ್ಲ, ಮರಹಿನೊಳಗೆ ಮರೆದುದಿಲ್ಲ; ಎಂತಿರ್ದಡಂತೆ ಬ್ರಹ್ಮ ನೋಡಾ! ಮನ ಮನ ಲೀಯವಾಗಿ ಘನ ಘನ ಒಂದಾದಡೆ ಮತ್ತೆ ಮನಕ್ಕೆ ವಿಸ್ಮಯವೇನು ಹೇಳಾ? ಕೂಡಲಚೆನ್ನಸಂಗನ ಶರಣರು ಕಾಯವೆಂಬ ಕಂಥೆಯ ಕಳೆಯದೆ ಬಯಲಾದಡೆ ನಿಜವೆಂದು ಪರಿಣಾಮಿಸಬೇಕಲ್ಲದೆ ಅಂತಿಂತೆನಲುಂಟೆ ಸಂಗನಬಸವಣ್ಣಾ.
Transliteration Ādiyalli huṭṭittalla, anādiyalli beḷeyittalla; mūrtiyalli nindudalla, a mūrtiyalli bhāviyalla; arivinoḷage aridudalla, marahinoḷage maredudilla; entirdaḍante brahma nōḍā! Mana mana līyavāgi ghana ghana ondādaḍe matte manakke vismayavēnu hēḷā? Kūḍalacennasaṅgana śaraṇaru kāyavemba kantheya kaḷeyade bayalādaḍe nijavendu pariṇāmisabēkallade antintenaluṇṭe saṅganabasavaṇṇā.