•  
  •  
  •  
  •  
Index   ವಚನ - 1010    Search  
 
ಆದಿ ಅನಾದಿ ಆತ್ಮ ವಿವೇಕ ಅನುಭಾವ ಸಂಬಂಧವೆಂತೆಂದಡೆ; ಆದಿಯೆ ದೇಹ, ಅನಾದಿಯೆ ಆತ್ಮ. ಇಂತೀ ಆದಿ ಅನಾದಿಯ ಮೇಲಿಪ್ಪುದೆ ಪರಮಪ್ರಣವ. ಆ ಪರಮಪ್ರಣವದ ಸುವರ್ಣದ ಪ್ರಭೆಯ ಮೇಗಳ ಸೂಕ್ಷ್ಮಲಿಂಗವೆ ನಾದ ಬಿಂದು ಕಳಾತೀತವಾದ ಜೋತಿರ್ಮಯಲಿಂಗ, ದೇಹ ಮನ ಪ್ರಾಣ ಇಂದ್ರಿಯಂಗಳೆಲ್ಲವು ಆ ಲಿಂಗಕ್ಕೆ ಭಿನ್ನವೆಂಬ ಅಜ್ಞಾನಿಗಳ ಮೆಚ್ಚನು ಕೂಡಲಚೆನ್ನಸಂಗಮದೇವ.
Transliteration Ādi anādi ātma vivēka anubhāva sambandhaventendaḍe; ādiye dēha, anādiye ātma. Intī ādi anādiya mēlippude paramapraṇava. Ā paramapraṇavada suvarṇada prabheya mēgaḷa sūkṣmaliṅgave nāda bindu kaḷātītavāda jōtirmayaliṅga, dēha mana prāṇa indriyaṅgaḷellavu ā liṅgakke bhinnavemba ajñānigaḷa meccanu kūḍalacennasaṅgamadēva.