ಆರಾದಡೆಯೂ ನಿಮ್ಮ ನೆನೆವರಯ್ಯಾ,
ನಾ ನಿಮ್ಮ ನೆನೆವನಲ್ಲ.
ಅದೇನು ಕಾರಣವೆಂದಡೆ;
ನೆನೆವ ಎನ್ನ ಮನ ನೀವೆಯಾದಿರಾಗಿ.
ಆರಾದಡೆಯೂ ನಿಮ್ಮ ಪೂಜಿಸುವರಯ್ಯಾ,
ನಾ ನಿಮ್ಮ ಪೂಜಿಸುವನಲ್ಲ.
ಅದೇನು ಕಾರಣವೆಂದೆಡೆ;
ಎನ್ನ ತನುವಿಂಗೆ ನೀವೆ ಪೂಜೆಯಾದಿರಾಗಿ.
ಆರಾದಡೆಯೂ ನಿಮಗರ್ಪಿಸುವರಯ್ಯಾ,
ನಾ ನಿಮಗರ್ಪಿಸುವನಲ್ಲ.
ಅದೇನು ಕಾರಣವೆಂದಡೆ
ಎನ್ನ ಸರ್ವಾಂಗವೂ ನಿಮಗರ್ಪಿತವಾಯಿತ್ತಾಗಿ.
ಇದು ಕಾರಣ, ಭಕ್ತದೇಹಿಕದೇವ
ದೇವದೇಹಿಕಭಕ್ತನೆಂಬ
ಶ್ರುತಿಯನರಿದು, ನಿಮ್ಮ ಮುಟ್ಟಿ ಅಭಿನ್ನನಾದೆನು,
ಕೂಡಲಚೆನ್ನಸಂಗಮದೇವಾ.
Transliteration Ārādaḍeyū nim'ma nenevarayyā,
nā nim'ma nenevanalla.
Adēnu kāraṇavendaḍe;
neneva enna mana nīveyādirāgi.
Ārādaḍeyū nim'ma pūjisuvarayyā,
nā nim'ma pūjisuvanalla.
Adēnu kāraṇavendeḍe;
enna tanuviṅge nīve pūjeyādirāgi.
Ārādaḍeyū nimagarpisuvarayyā,
nā nimagarpisuvanalla.
Adēnu kāraṇavendaḍe
enna sarvāṅgavū nimagarpitavāyittāgi.
Idu kāraṇa, bhaktadēhikadēva
dēvadēhikabhaktanemba
śrutiyanaridu, nim'ma muṭṭi abhinnanādenu,
kūḍalacennasaṅgamadēvā.