ಆರಿಗೆ ಮಾಡಬಹುದಯ್ಯಾ
ಸದ್ಭಕ್ತಿಯೆಂಬುದನು ಬಸವಣ್ಣಂಗಲ್ಲದೆ?
ಆರಿಗೆ ತಿಳಿವುದಯ್ಯಾ ಶಿವಜ್ಞಾನದ
ಸೆರಗು ಬಸವಣ್ಣಂಗಲ್ಲದೆ?
ನಿರಾಳದ ಸಿಂಹಾಸನದ ಮೇಲೆ ನಿರವಯ
ಬಂದೆರಗಿದಡೆ ಆ ನಿರಾಕಾರ ಪದಾರ್ಥವನರ್ಪಿಸಿ,
ಪ್ರಸನ್ನತೆಯ ಪಡೆದ ಬಸವಣ್ಣನು!
ಸಾಕಾರಸಿಂಹಾಸನದ ಮೇಲೆ ಮೂರ್ತಿಗೊಂಡ
ಸಂಗಮನಾಥ ಮುನಿದೆದ್ದು ಹೋದಡೆ,
ತನುವಿನೊಳಗೆ ತನುವಾಗಿ ಹೊಕ್ಕು
ಮನದೊಳಗೆ ಮನವಾಗಿ,
ಭಾವದೊಳಗೆ ಭಾವವಾಗಿ ವೇದಿಸಿ
ಶಿವಶರಣರ ಮನದ ಕಂದುಕತ್ತಲೆಯ ಕಳೆದು,
ತನ್ನತ್ತ ತಿರುಗಿ ಪ್ರಸನ್ನತೆವಡೆದ.
ಇಂತೀ ಉಭಯ ನಿರ್ಣಯದಲ್ಲಿ ನಿಸ್ಸೀಮನಾದ ಬಸವಣ್ಣ.
ಕೂಡಲಚೆನ್ನಸಂಗಮದೇವರ ಶರಣ ಬಸವಣ್ಣಂಗೆ
ತ್ರಿಜಗದೊಳಗೆ ಆರನೂ ಸರಿ ಕಾಣೆನು.
Transliteration Ārige māḍabahudayyā
sadbhaktiyembudanu basavaṇṇaṅgallade?
Ārige tiḷivudayyā śivajñānada
seragu basavaṇṇaṅgallade?
Nirāḷada sinhāsanada mēle niravaya
banderagidaḍe ā nirākāra padārthavanarpisi,
prasannateya paḍeda basavaṇṇanu!
Sākārasinhāsanada mēle mūrtigoṇḍa
saṅgamanātha munideddu hōdaḍe,
tanuvinoḷage tanuvāgi hokku
manadoḷage manavāgi,
bhāvadoḷage bhāvavāgi vēdisi
Śivaśaraṇara manada kandukattaleya kaḷedu,
tannatta tirugi prasannatevaḍeda.
Intī ubhaya nirṇayadalli nis'sīmanāda basavaṇṇa.
Kūḍalacennasaṅgamadēvara śaraṇa basavaṇṇaṅge
trijagadoḷage āranū sari kāṇenu.