•  
  •  
  •  
  •  
Index   ವಚನ - 1094    Search  
 
ಒಮ್ಮೆ ನೆಲದಲ್ಲಿ ಬಿತ್ತಿದ ಬಿತ್ತುವ ಕಿತ್ತಿ ಕಿತ್ತಿ ಮತ್ತೆ ಬಿತ್ತುತ್ತ ಹೋದಡೆ, ಆ ಬಿತ್ತು ಮೊಳೆತು ಕಳೆಯೇರಿ ಬೆಳೆದು ಬೆಳಸನೀವ ಪರಿಯಿನ್ನೆಂತೋ, ಮರುಳು ಮಾನವಾ? ಗುರುವಿತ್ತ ಲಿಂಗವ ತೊರೆ ತೊರೆದು ಮರಳಿ ಮರಳಿ ಧರಿಸಿದಡೆ ಆ ಇಷ್ಟಲಿಂಗವು ಅನಿಷ್ಟವ ಕಳೆದು ಇಷ್ಟಾರ್ಥವನೀವ ಪರಿಯಿನ್ನೆಂತೋ? ಇದು ಕಾರಣ- ಕೂಡಲಚೆನ್ನಸಂಗಯ್ಯನಲ್ಲಿ ಮುಕ್ತಿಯನರಸುವಡೆ ಅಂಗನಲ್ಲಿ ಹೆರೆಹಿಂಗದೆ ಲಿಂಗವ ಧರಿಸಬೇಕು.
Transliteration Om'me neladalli bittida bittuva kitti kitti matte bittutta hōdaḍe, ā bittu moḷetu kaḷeyēri beḷedu beḷasanīva pariyinnentō, maruḷu mānavā? Guruvitta liṅgava tore toredu maraḷi maraḷi dharisidaḍe ā iṣṭaliṅgavu aniṣṭava kaḷedu iṣṭārthavanīva pariyinnentō? Idu kāraṇa- kūḍalacennasaṅgayyanalli muktiyanarasuvaḍe aṅganalli herehiṅgade liṅgava dharisabēku.