ಓದನಾದರಿಸಿ, ಗಿಳಿಯ ತಂದು ಸಲಹಿ ಓದಿಸಿದಳಯ್ಯಾ;
ಆಲದ ಮರದ ಗಿಳಿ ಓಜೆಗೊಂಡಿತ್ತಯ್ಯಾ!
ಗಿಳಿ ಓದಿತ್ತು, ತನ್ನ ಪರಬ್ರಹ್ಮವ ಬೇಡಿತ್ತು;
ತನ್ನ ಪೂರ್ವಾಶ್ರಯವ ಕೊರೆಯ ಕೂಲನುಂಡ ಗಿಳಿ,
ಮರೆಯಿತ್ತು ತನ್ನ ತಾನು!
ಅರಿವೆಂಬ ಜ್ಞಾನ ಹುಟ್ಟಿತ್ತಯ್ಯಾ;
ಅರಿವೆಂಬ ಜ್ಞಾನ ಹುಟ್ಟಲಿಕೆ
ಜಂಪಿನ ಕಡ್ಡಿಯ ಮೇಲೆ ಕುಳಿತಿರ್ದಿತ್ತಯ್ಯಾ!
ಜಂಪಿನ ಕಡ್ಡಿಯ ಮೇಲೆ ಕುಳಿತ ಗಿಳಿ,
ಜಂಪಳಿಸುತ್ತಿರ್ದಿತ್ತು ತನ್ನ ತಾನು.
`ಅಕ್ಕಟಾ ಅಕ್ಕಟಾ' ಎಂದು,
ತನ್ನ ಪೂರ್ವಾಶ್ರಯದ ಅಕ್ಕನೆಂಬಾ ಅಕ್ಕನ ಕರೆಯಿತ್ತು.
ಚಕ್ಕನೆ ಲಿಂಗವೆಂಬ ಗೊಂಚಲ
ಹಿಡಿಯಲು ಮಿಕ್ಕು ಪಲ್ಲವಿಸಿತ್ತು,
ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುವೆಂಬ ಲಿಂಗವು.
Transliteration Ōdanādarisi, giḷiya tandu salahi ōdisidaḷayyā;
ālada marada giḷi ōjegoṇḍittayyā!
Giḷi ōdittu, tanna parabrahmava bēḍittu;
tanna pūrvāśrayava koreya kūlanuṇḍa giḷi,
mareyittu tanna tānu!
Arivemba jñāna huṭṭittayyā;
arivemba jñāna huṭṭalike
jampina kaḍḍiya mēle kuḷitirdittayyā!
Jampina kaḍḍiya mēle kuḷita giḷi,
jampaḷisuttirdittu tanna tānu.
`Akkaṭā akkaṭā' endu,
tanna pūrvāśrayada akkanembā akkana kareyittu.
Cakkane liṅgavemba gon̄cala
hiḍiyalu mikku pallavisittu,
kūḍalacennasaṅgayyanalli prabhuvemba liṅgavu.