•  
  •  
  •  
  •  
Index   ವಚನ - 1105    Search  
 
ಗಚ್ಚನ್ ತಿಷ್ಠನ್, ಸ್ವಪನ್ ಜಾಗ್ರನುನ್ಮಿಷನ್ನಿಮಿಷನ್ನಪಿ| ಶುಚಿರ್ವಾsಪ್ಯಶುಚಿರ್ವಾಪಿ ಲಿಂಗಂ ಸರ್ವತ್ರ ಧಾರಯೇತ್|| ಇಂತೆಂದುದಾಗಿ, ಕಂಗಳ ಮುಂದಣಿಂದ ಗುರುಲಿಂಗ ಹಿಂಗಿದಡೆ, ವ್ರತಕ್ಕೆ ಭಂಗವಾಗುವುದೆಂದು [ಶ್ರೀಗುರು] ತಂದುಕೊಟ್ಟನು ಕರಸ್ಥಲದಲ್ಲಿ ಇಷ್ಟಲಿಂಗವನು. ಆ ಲಿಂಗ ಮುಟ್ಟಲೊಡನೆ ತನು ಪ್ರಸಾದವಾಯಿತ್ತು ಮನ ಪ್ರಸಾದವಾಯಿತ್ತು. ಇಂತು ಸರ್ವಾಂಗ ಪ್ರಸಾದವಾಯಿತ್ತು ಕೂಡಲಚೆನ್ನಸಂಗಮದೇವಾ.
Transliteration Gaccan tiṣṭhan, svapan jāgranunmiṣannimiṣannapi| śucirvāspyaśucirvāpi liṅgaṁ sarvatra dhārayēt|| intendudāgi, kaṅgaḷa mundaṇinda guruliṅga hiṅgidaḍe, vratakke bhaṅgavāguvudendu [śrīguru] tandukoṭṭanu karasthaladalli iṣṭaliṅgavanu. Ā liṅga muṭṭaloḍane tanu prasādavāyittu mana prasādavāyittu. Intu sarvāṅga prasādavāyittu kūḍalacennasaṅgamadēvā.