•  
  •  
  •  
  •  
Index   ವಚನ - 1106    Search  
 
ಕಂಗಳ ನೋಟ ಕರಸ್ಥಳದ ಪ್ರಾಣ, ಮನದೊಳಗೆ ಪರಿಣಾಮವ ತೋರುತ್ತಿದೆ ನೋಡಾ! ನಡೆದಡೆ ಹೆಜ್ಜೆಯಿಲ್ಲ, ನಿಂದಡೆ ನೆಳಲಿಲ್ಲ, ಸುಳುಹಿನೊಳಗೊಂದು ಅತಿಶಯದ ಸುಳುಹು ನೋಡಾ! ತೆರೆಯ ಮರೆಯ ಪರಶಿವನು ನಡೆಗಲಿತು ಬಪ್ಪ ಕರುಣವ ನೋಡಾ! ಸಂಗನಬಸವಣ್ಣಾ, ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ ಪ್ರಭುದೇವರ ಬರವು ತಪ್ಪದು.
Transliteration Kaṅgaḷa nōṭa karasthaḷada prāṇa, manadoḷage pariṇāmava tōruttide nōḍā! Naḍedaḍe hejjeyilla, nindaḍe neḷalilla, suḷuhinoḷagondu atiśayada suḷuhu nōḍā! Tereya mareya paraśivanu naḍegalitu bappa karuṇava nōḍā! Saṅganabasavaṇṇā, kūḍalacennasaṅgamadēvaru sākṣiyāgi prabhudēvara baravu tappadu.